Pouti Khate :ಪೌತಿ ಖಾತೆ ಎಂದರೇನು ? ಪೌತಿ ಖಾತೆ ಗೆ ಅರ್ಜಿ ಹಾಕುವುದು ಹೇಗೆ ?

By kannadadailyupdate

Published on:

Pouti Khate

Pouti Khate :ನಾಗರಿಕರು ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಕೊಳ್ಳಬಹುದು. ಅದು ಪೌತಿ ಖಾತೆ ಅಡಿಯಲ್ಲಿ ಹಾಗಾದ್ರೆ ಪೌತಿ ಖಾತೆ ಎಂದರೇನು? ಪೌತಿ ಖಾತೆ ಮಾಡಿಸುವಾಗ ದಾಖಲೆಗಳು ಏನೇನುಬೇಕು?ಅರ್ಜಿ ಎಲ್ಲಿ ಸಲ್ಲಿಸಬೇಕು, ಅದರ ಪ್ರಕ್ರಿಯೆ ಹೇಗಿರುತ್ತೆ? ಪೌತಿ ಖಾತೆ ಬಗ್ಗೆ ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ. ಆದ್ದರಿಂದ ಲೇಖನವನ್ನ ಸಂಪೂರ್ಣ ಓದಿ

WhatsApp Group Join Now
Telegram Group Join Now

Pouti Khate ಪೌತಿ ಖಾತೆ ಎಂದರೇನು?

ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಹೆಸರಿಗೆ ಜಮೀನಿನ ಖಾತೆಯನ್ನು ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಬಹುದು.ಉದಾಹರಣೆಗೆ ಒಂದು ಮನೆಯಲ್ಲಿ ತಂದೆ, ಗಂಡ ಅಥವಾ ಅಜ್ಜ ಮರಣಹೊಂದಿದರೆ ಅವರ ಹೆಸರಿನಲ್ಲಿರುವ ಆಸ್ತಿಯನ್ನು ಅವರ ಮನೆಯ ಕುಟುಂಬದ ಸದಸ್ಯರು ಅಥವಾ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಳ್ಳಬಹುದು.

ಪೌತಿ ಖಾತೆ ಮಾಡಿಸಿಕೊಳ್ಳಲು ಮುಖ್ಯವಾಗಿ ಏನೇನು ದಾಖಲೆಗಳು ಬೇಕಾಗುತ್ತವೆ .

  • ಮರಣ ಪ್ರಮಾಣ ಪತ್ರ, ಮರಣ ಹೊಂದಿರುವ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ಬೇಕಾಗುತ್ತೆ.
  • ಆಧಾರ್ ಕಾರ್ಡ್ ಮನೆಯಲ್ಲಿರುವ ಪ್ರತಿಯೊಬ್ಬರದು ಆಧಾರ್ ಕಾರ್ಡ್ ಸಲ್ಲಿಸಬೇಕಾಗುತ್ತೆ.
  • ವಂಶವೃಕ್ಷ ಪ್ರಮಾಣ ಪತ್ರ ಅಂದ್ರೆ ವಂಶಾವಳಿ ಪ್ರಮಾಣಪತ್ರ ಮುಖ್ಯವಾಗಿ ಬೇಕು.
  • ಪಹಣಿ, ಇತ್ತೀಚಿನ ಪಹಣಿ ಪ್ರಿಂಟ್ ತೆಗೆದುಕೊಂಡು ಲಗತ್ತಿಸಬೇಕು.
  • ಎಮ್ ಆರ್ ಅಂದ್ರೆ ಮ್ಯೂಟೇಷನ್ ರಿಪೋರ್ಟ್. ಅದು ಕೂಡ ಅಷ್ಟೇ ಅಂದಾಜು 15 ವರ್ಷದಿಂದ ಸಿಗುವ ಮಾಡಬೇಕಾಗುತ್ತೆ. ಜೊತೆಗೆ ಇತ್ತೀಚಿನ ಎಂ ಆರ್ ಪಿ ಕೂಡ ಹೊಂದಿರಬೇಕು
  • ಅದರ ಜೊತೆಗೆ ಇದು ನಾಡ ಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ದೊರೆಯುತ್ತೆ. ಇದುಲ್ಲದೆ ವೋಟರ್ ಐಡಿ ಕಾರ್ಡ್ ಪಡಿತರ ಚೀಟಿ ಇದ್ದರೆ ಅದನ್ನು ಕೂಡ ದಾಖಲೆಗಳ ಜೊತೆಗೆ ಲಗತ್ತಿಸಿ.
Pouti Khate
Pouti Khate

ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳು ತೆಗೆದುಕೊಂಡು ನಿಮ್ಮ ಹೋಬಳಿ ಅಥವಾ ತಾಲ್ಲೂಕು ಮಟ್ಟದಲ್ಲಿರುವ ನಾಡ ಕಚೇರಿಗೆ ಹೋಗಬೇಕು.ಅಲ್ಲಿ ನೀವು ಪೌತಿ ಖಾತೆ ಅಡಿಯಲ್ಲಿ ಖಾತೆ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಆಗಿರುವ ಬಗ್ಗೆ ಅ ಕ್ಲಾಸ್ ಸ್ಲೀಪರ್ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಿದ ಬಳಿಕ ಕೆಲವು ದಿನಗಳ ನಂತರ ಗ್ರಾಮ ಲೆಕ್ಕಿಗರು ನಿಮ್ಮನ್ನು ಸಂಪರ್ಕಿಸಿ ಈ ಮೇಲೆ ಹೇಳಿರುವ ಎಲ್ಲ ದಾಖಲೆಗಳು ಒರಿಜಿನಲ್ ಪ್ರತಿ ತರಲು ಹೇಳುತ್ತಾರೆ.

ಒರಿಜಿನಲ್ ದಾಖಲೆಗಳು ವೆರಿಫೈ ಮಾಡಿ ಜೆರಾಕ್ಸ್ ಪ್ರತಿಗಳನ್ನು ಗ್ರಾಮ ಲೆಕ್ಕಿಗರು ತೆಗೆದುಕೊಳ್ಳುತ್ತಾರೆ. ಹಾಗೆ ಇನ್ನು ಕೆಲವು ಫಾರ್ಮ್ ಗಳು ನಿಮಗೆ ಕೊಡುತ್ತಾರೆ. ಆ ಫಾರಂ ಮೇಲೆ ನಿಮ್ಮ ಜಮೀನಿನ ಸುತ್ತಮುತ್ತ ಇರುವ ಹೊಲದ ಮಾಲೀಕರ ಹೆಸರು ಸೈನ್ ಮಾಡಿಸಬೇಕು ಮತ್ತು ಸರ್ವೆ ನಂಬರ್ಬೇಕಾಗುತ್ತೆ.ಆದ್ದರಿಂದ ಈ ಕೆಲಸ ಆಗಲು ಸುಮಾರು 30 ದಿನಗಳು ಬೇಕಾಗಬಹುದು.ನಂತರ ಅಂದಾಜು ಮೂರು ಅಥವಾ ನಾಲ್ಕು ತಿಂಗಳ ಆದಮೇಲೆ ವಾರಸುದಾರರ ಹೆಸರಿನಲ್ಲಿ ಖಾತೆ ಬದಲಾವಣೆ ಆಗಿ ಪಹಣಿ ವಾರಸುದಾರನ ಹೆಸರಿನಲ್ಲಿ ಬರುತ್ತೆ.

ಪೌತಿ ಖಾತೆ ಅಡಿಯಲ್ಲಿ ನಿಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿದರೆ ಏನು ಉಪಯೋಗ

ಸರಕಾರದಿಂದ ದೊರೆಯುವಂತ ಸಾಲ ಸೌಲಭ್ಯಗಳು ಸರಳವಾಗಿ ನಿಮಗೆ ದೊರೆಯುತ್ತದೆ.ಅಲ್ಲದೆ ಪ್ರಕೃತಿ ವಿಕೋಪದಂತ ವೇಳೆ ಬೆಳೆ ನಾಶವಾದಾಗ ಬೆಳೆ ವಿಮೆ ಪರಿಹಾರ ಪಡೆಯಲು ಸಾಧ್ಯವಾಗುತ್ತೆ. ಈ ಪೌತಿ ಖಾತೆ ಅಡಿಯಲ್ಲಿ ಖಾತೆ ಬದಲಾವಣೆ ಆದ್ರೆ ನಿಮಗೆ.ಹಾಗೆ ಸರಕಾರ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಕಾಯ್ದೆಯಂತೆ ನಿಮ್ಮ ಭೂಮಿ ವಶಪಡಿಸಿಕೊಂಡಗಳು ಪರಿಹಾರದ ಹಣ ಪಡೆಯಲು ವಿವಿಧ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಅಂದರೆ ಪರಿಹಾರದ ಹಣ ನಿಮಗೆ ಬೇಗ ದೊರೆಯುತ್ತೆ.

Read More

Gruha lakshmi:ಈ ದಿನದಂದು ಬಿಡುಗಡೆಯಾಗಲಿದೆ ಗೃಹ ಲಕ್ಷ್ಮಿ 11 ಕಂತಿನ ಹಣ !

ಈ ದಿನದಂದು ಬಿಡುಗಡೆಯಾಗಲಿದೆ PM Kisan 17th installment !ಆನ್‌ಲೈನ್‌ನಲ್ಲಿ ನಿಮ್ಮ ಹೆಸರನ್ನ ಪರಿಶೀಲಿಸಿ

Arecanut Price in Karnataka :ಇಂದು ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ

kannadadailyupdate

Leave a Comment