ವಿಟಮಿನ್ ಬಿ12 (vitamin-b12) ಕೊರತೆಯಿಂದ ಏನೆಲ್ಲಾ ಸಮಸ್ಯೆಗಳು ಕಾಣುತ್ತವೇ ನಿಮಗೆ ಗೊತ್ತಾ!
ಮನಸ್ಸಿಗೆ ಹಾಗೂ ದೇಹಕ್ಕೆ ಕಿರಿಕಿರಿ, ಖಿನ್ನತೆ ಮತ್ತು ಆತಂಕಗಳು ಬಿ12 ಕೊರತೆಯೊಂದಿಗೆ ಸಂಬಂಧ ಹೊಂದಬಹುದಾದ ಕೆಲವು ಮನಸ್ಥಿತಿ ಬದಲಾವಣೆಗಳಾಗಿವೆ. ಕೈಗಳು ಅಥವಾ ಪಾದಗಳಲ್ಲಿ ಜುಮ್ಮೆನಿಸುವಿಕೆ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದ್ದು, ಈ ಲಕ್ಷಣಗಳು ಕೈಗಳು ಮತ್ತು ಪಾದಗಳಿಂದ ಪ್ರಾರಂಭವಾಗಿ, ಕ್ರಮೇಣವಾಗಿ ದೇಹದ ಇತರ ಭಾಗಗಳಿಗೆ ಹರಡಬಹುದು.
ವಿಟಮಿನ್ ಬಿ12 ನೆನಪಿನ ಶಕ್ತಿ ಹಾಗೂ ಆಲೋಚನಾ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಗೊಂದಲ ಉಂಟಾಗುವುದು, ನೆನಪಿನ ಶಕ್ತಿ ಕಡಿಮೆಯಾಗಬಹುದು ಅಥವಾ ಗಮನ ಹರಿಸಲು ತೊಂದರೆಯಂತಹ ಲಕ್ಷಣಗಳನ್ನು ಸೂಚಿಸುತ್ತದೆ. ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಬಿ12 ಅಗತ್ಯವಿರುವುದರಿಂದ, ಅದರ ಕೊರತೆಯು ನೀವು ಎಷ್ಟೇ ವಿಶ್ರಾಂತಿ ಪಡೆದರೂ ಸಹ ನಿಮ್ಮನ್ನು ಆಯಾಸಗೊಳಿಸಬಹುದು.
ಈ ವಿಟಮಿನ್ ಕೊರತೆಯು ದೇಹದ ಸಮತೋಲನ ಮತ್ತು ಮೋಟಾರ್ ಕೌಶಲ್ಯಗಳ ಮೇಲೆ ಪರಿಣಾಮ ಬೀರುವುದರಿಂದ ಎಡವಿ ಬೀಳುವುದು ,ವಸ್ತುಗಳನ್ನು ಬೀಳಿಸುವುದು ಅಥವಾ ಆತಂಕದಂತಹ ಲಕ್ಷಣಗಳನ್ನು ತೋರಿಸಬಹುದು. ಜೊತೆಗೆ ನಿಮ್ಮ ದೇಹದ ಆರೋಗ್ಯಕರ ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸರಳ ವಾಕಿಂಗ್, ದೈನಂದಿನ ಕಡಿಮೆ ಚಟುವಟಿಕೆಯನ್ನು ಮಾಡಲು ಸಹ ಏದುಸಿರು ಬರಬಹುದು.
ಗುಲಾಬಿ ಬಣ್ಣದ ಚರ್ಮವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಬಿ12 ಸಮಸ್ಯೆಯಿಂದ ಕೆಂಪು ರಕ್ತ ಕಣಗಳ ಉತ್ಪಾದನೆಯ ಕೊರತೆಯಾಗುತ್ತದೆ. ಜನರು ಗ್ಲಾಸಿಟಿಸ್ ಮತ್ತು ಬಾಯಿ ಹುಣ್ಣುಗಳನ್ನು ಅನುಭವಿಸಬಹುದು. ದೀರ್ಘಾಕಾಲದಿಂದ ಈ ವಿಟಮಿನ್ ಕೊರತೆ ಇದ್ದರೆ ಕೆಲವರಿಗೆ ರುಚಿ ಪ್ರಜ್ಞೆಯು ಕಡಿಮೆಬಇರುತ್ತದೆ. ವಾಕರಿಕೆ, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ಅತಿಸಾರ ಮತ್ತು ಉಸಿರಾಟದ ತೊಂದರೆಗಳನ್ನು ಒಳಗೊಂಡಿರಬಹುದು.
READ MORE: ಒಂದು ವೇಳೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಆಗುವ ತೊಂದರೆಗಳು
ಮಹೀಂದ್ರಾ ಥಾರ್ಗೆ ಅದ್ಭುತ ಬೇಡಿಕೆ: ಕಳೆದ ತಿಂಗಳಲ್ಲಿ ಮಾರಾಟವಾದ ಸಂಖ್ಯೆಯು ಎಷ್ಟು ಗೊತ್ತೇ?