ಬಿಳಿ ಕೂದಲನ್ನು ಕಪ್ಪಾಗಿಸುವ ಈ ಎಣ್ಣೆಯನ್ನು ಹಚ್ಚಿ ಒಂದು ಸಲ ನೋಡಿ!

By kavya gk

Published on:

white hair ಬಿಳಿ ಕೂದಲನ್ನು ಕಪ್ಪಾಗಿಸುವ ಈ ಎಣ್ಣೆಯನ್ನು ಹಚ್ಚಿ ಒಂದು ಸಲ ನೋಡಿ! ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನು ಭಾದಿಸುತ್ತಿದೆ. ಇದರಿಂದ ಅನೇಕ ಬಾರಿ ಬೇಜಾರುಮಾಡಿಕೊಳ್ಳುತ್ತೇವೆ. ಆದರೆ ಇದು ಏನು ದೊಡ್ಡ ಸಮಸ್ಯೆ ಏನು ಅಲ್ಲ. ಈ ಸಮಸ್ಯೆಯನ್ನು ಪರಿಹಾರ ಮಾಡಲು ಆಯುರ್ವೇದದಲ್ಲಿ ಅನೇಕ ಪರಿಹಾರ ಮಾರ್ಗಗಳಿವೆ. ಧೂಳು, ಅನಾರೋಗ್ಯಕರವಾದ ಜೀವನಮಟ್ಟ,

WhatsApp Group Join Now
Telegram Group Join Now

ಅಪೌಷ್ಠಿಕತೆ ಮುಂತಾದ ಕಾರಣಗಳಿಂದಾಗಿ ಕೂದಲು ಉದುರುವುದು, ತಲೆಹೊಟ್ಟು, ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಇಂತಹ ಎಲ್ಲಾ ಸಮಸ್ಯೆಗಳಿಗೆ ಬಾದಾಮಿ ಎಣ್ಣೆ ಬಹಳ ಪ್ರಯೋಜನಕಾರಿಯಾಗಿದೆ. ಬಾದಾಮಿ ಎಣ್ಣೆಯಲ್ಲಿ ಬಯೋಟಿನ್ ಸಮೃದ್ಧವಾಗಿದ್ದು, ಇದು ಕೂದಲಿನ ಬೇರುಗಳನ್ನು ಪೋಷಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಮೃದುಗೊಳಿಸುತ್ತದೆ. ಅಲ್ಲದೇ ಕೂದಲನ್ನು ರೇಷ್ಮೆಯಂತೆ ಮಾಡಲು ಕಂಡಿಷನ ನರ್ ಆಗಿ ಕಾರ್ಯನಿರ್ವಹಿಸುತ್ತದೆ.

ಈ ಮೂರು ಯೋಗಾಸನವನ್ನು ಪ್ರತಿ ನಿತ್ಯ ಹತ್ತು ನಿಮಿಷ ಮಾಡಿದ್ದರೆ ಸಾಕು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ

ಬಾದಾಮಿ ಎಣ್ಣೆಯು ಕೂದಲಿಗೆ ಹಾನಿಯಾಗುವುದನ್ನು ತಡೆಗಟ್ಟುತ್ತದೆ ಮತ್ತು ನಿಮ್ಮ ಕೂದಲನ್ನು ಬಾಚಿಕೊಳ್ಳುವಾಗ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚುವ ಮೊದಲು ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ, ನಿಮ್ಮ ನೆತ್ತಿಯ ಮೇಲೆ ಎಣ್ಣೆಯನ್ನು ಹಾಕಿಕೊಂಡು ಅದನ್ನು ನಿಧಾನವಾಗಿ ಮಸಾಜ್ ಮಾಡಿ. ಕೂದಲಿನ ಉದ್ದಕ್ಕೆ ಎಣ್ಣೆಯನ್ನು ಹಚ್ಚಿ, ಮೂರು ನಾಲ್ಕು ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ಉದುರುವಿಕೆಯನ್ನು ತಡೆಯಬಹುದು ಮತ್ತು ಕೂದಲಿನ ಬೆಳವಣಿಯು ಚೆನ್ನಾಗಿ ಆಗುತ್ತದೆ.

ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸುವುದರಿಂದ ಆಗುವ ಅದ್ಬುತ ಲಾಭ

kavya gk

Leave a Comment