Apple iphone ತಯಾರಿಕೆಯಲ್ಲಿ ನಮ್ಮದೇ ಮೇಲುಗೈ ಆ್ಯಪಲ್ ಐಫೋನ್ ತಯಾರಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿ ಅಮೇರಿಕಕ್ಕೆ ಅತಿದೊಡ್ಡ ಐಫೋನ್ ರಫ್ತುದಾರ ರಾಷ್ಟ್ರವಾಗಿದೆ. ಐಫೋನ್ ತಯಾರಿಕೆಯಲ್ಲಿ ಭಾರತದ ಮಹತ್ವದ ಸಾಧನೆಗೈದಿದ್ದು, ಚೀನಾ ದೇಶವನ್ನು ಹಿಂದಿಕ್ಕಿ ಅತಿದೊಡ್ಡ ಐಫೋನ್ ರಫ್ತುದಾರ ರಾಷ್ಟ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾರತವು ಐಫೋನ್ ತಯಾರಿಕೆಯಲ್ಲಿ ಚೀನಾ ದೇಶಕ್ಕಿಂತ ಮುಂದೆ ಇದೆ. ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿ ಮಾಡಿದೆ.
ಭಾರತದಲ್ಲಿ ತಯಾರಾದ ಸುಮಾರು ಮೂರು ಮಿಲಿಯನ್ iphoneಗಳನ್ನು ಏಫ್ರಿಲ್ನಲ್ಲಿ ಅಮೇರಿಕಕ್ಕೆ ರವಾನಿಸಲಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಚೀನಾದಿಂದ ಫೋನ್ ಸಾಗಣೆಗಳು ಶೇ 76 ರಷ್ಟು ಕುಸಿದು ಕೇವಲ 900000 ಯೂನಿಟ್ಗಳಿಗೆ ತಲುಪಿವೆ ಎಂದು ವರದಿ ಮಾಡಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ಆಮದು ಮಾಡಿಕೊಳ್ಳದ ಐಫೋನ್ಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುದಾಗಿ ಎಚ್ಚರಿಸಿದ ನಂತರವೂ ಐಫೋನ್ ಗಮನಾರ್ಹ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳು ಬಂದಿರುವುದು ವಿಶೇಷವಾಗಿದೆ.
ಏಫ್ರಿಲ್ನಲ್ಲಿ ಏರಿಕೆಯಾದ ಬೆಲೆ ಏರಿಕೆಯು ಸುಂಕ ಹೆಚ್ಚಳಕ್ಕೆ ಮುಂಚಿತವಾಗಿ ಕಾರ್ಯತಂತ್ರದ ದಾಸ್ತಾನು ಸಂಗ್ರಹಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಓಮ್ಡಿಯಾದ ಸಂಶೋಧನಾ ವ್ಯವಸ್ಥಾಪಕ ಲೆಕ್ಸುವಾನ್ ಚೀವ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಐಫೋನ್ಗಳು ವರ್ಷಕ್ಕೆ 220 ಮಿಲಿಯನ್ಗಿಂತಲೂ ಹೆಚ್ಚು ಐಫೋನ್ಗಳನ್ನು ಮಾರಾಟ ಮಾಡುತ್ತದೆ ಮತ್ತು ಅದರ ದೊಡ್ಡ ಮಾರುಕಟ್ಟೆಗಳಲ್ಲಿ ಅಮೆರಿಕ,
KTM ಮೂರು ಇಂಧನ ಟ್ಯಾಂಕ್ ಗಳನ್ನು ಹೊಂದಿರುವ ಬೈಕ್ ಅನ್ನು ಪರಿಚಯಿಸಿದೆ ಇದರ ಬೆಲೆ ಎಷ್ಟು ಗೊತ್ತಾ?
ಚೀನಾ ಮತ್ತು ಯೂರೋಪ್ ಸೇರಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಐಎಎನ್ಎಸ್ ಪ್ರಕಾರ, ದೇಶದಲ್ಲಿ ಸಂಫೂರ್ಣವಾಗಿ ಸಂಯೋಜಿತ ಪೂರೈಕೆ ಸರಪಳಿಯ ಅನುಪಸ್ಥಿತಿಯಲ್ಲಿ ʻಮೇಡ್ ಇನ್ ಯುಎಸ್ ಆ್ಯಪಲ್ ಐಫೋನ್ ನ ಬೆಲೆ ಡಾಲರ್ 3500 ಆಗಬಹುದು ನಮ್ಮ ಭಾರತದ ರೂಪಾಯಿಯಲ್ಲಿ 298000 ಕ್ಕಿಂತ ಹೆಚ್ಚು ಆಗಬಹುದು. ದೇಶದಲ್ಲಿ ಪ್ರಸ್ತುತ ಫೋನ್ಗೆ ಬೇಡಿಕೆ ಪ್ರತಿ ತ್ರೈಮಾಸಿಕಕ್ಕೆ ಸುಮಾರು 20 ಮಿಲಿಯನ್ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತವು ಆ್ಯಪಲ್ ಐಫೋನ್ ಜಾಗತಿಕ ಪೂರೈಕೆ ಸರಪಳಿಗೆ ಪ್ರಮುಖ ಕೇಂದ್ರವಾಗಿದ್ದು, ಭಾರತದಲ್ಲಿ ನಿರ್ಮಿತವಾದ ಐಫೋನ್ಗಳನ್ನು ತಮಿಳುನಾಡಿನಲ್ಲಿರುವ ತೈವಾನೀಸ್ ಗುತ್ತಿಗೆ ತಯಾರಕ ಫಾಕ್ಸ್ ಕಾನ್ನ ಕಾರ್ಖಾನೆಯಲ್ಲಿ ಜೋಡಿಸಲಾಗುತ್ತದೆ. ಭಾರತದಲ್ಲಿ ಪೆಗಾಟ್ರಾನ್ ಕಾರ್ಪ್ ಕಾರ್ಯಾಚರಣೆಗಳನ್ನು ನಡೆಸುವ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತೊಂದು ಪ್ರಮುಖ ತಯಾರಕ. ಟಾಟಾ ಮತ್ತು ಫಾಕ್ಸ್ ಕಾನ್ ಹೊಸ ಸ್ಥಾವರಗಳನ್ನು ನಿರ್ಮಿಸುತ್ತಿವೆ ಮತ್ತು ಐಫೋನ್ ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದನಾ ಸಾಮರ್ಥ್ಯವನ್ನು ಸೇರಿಸುತ್ತಿವೆ.
ಈ ಮೂರು ಯೋಗಾಸನವನ್ನು ಪ್ರತಿ ನಿತ್ಯ ಹತ್ತು ನಿಮಿಷ ಮಾಡಿದ್ದರೆ ಸಾಕು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ
ತಜ್ಞರು ಹೇಳುವಂತೆ, ಭಾರತವು ಅಮೇರಿಕಾದ ಬೇಡಿಕೆಗಳನ್ನು ಪೂರೈಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಉದ್ಯೋಗ ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಜೂನ್ ತ್ರೈಮಾಸಿಕದಲ್ಲಿ ಐಫೋನ್ ಅಮೆರಿಕಾದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್ಗಳನ್ನು ಭಾರತದಿಂದ ಪಡೆಯುತ್ತದೆ ಎಂದು ಆ್ಯಪಲ್ ಐಫೋನ್ ಸಂಸ್ಥೆಯ ಮುಖ್ಯಸ್ಥ ಕುಕ್ ಹೇಳಿದರು.
ಆದರೇ ಚೀನಾವು ಅಮೆರಿಕದ ತೆರಿಗೆ ಸುಂಕಗಳ ಬಗ್ಗೆ ಅನಿಶ್ಚಿತತೆಯ ನಡುವೆ ಇತರ ಮಾರುಕಟ್ಟೆಗಳಿಗೆ ಹೆಚ್ಚಿನ ಸಾಧನಗಳನ್ನು ಉತ್ಪಾದಿಸುತ್ತದೆ. ಚೀನಾ ನಿರ್ಮಿತ ಐಫೋನ್ಗಳು ಇನ್ನು 30ರಷ್ಟು ಸುಂಕವನ್ನು ಎದುರಿಸುತ್ತಿವೆ. ಆದರೇ ಭಾರತೀಯ ಐಫೋನ್ಗಳಿಗೆ ಟ್ರಂಪ್ ಆಡಳಿತವು ಶೇ 10 ರಷ್ಟು ತೆರಿಗೆ ವಿಧಿಸುತ್ತದೆ. ನಮಗೆ ಇದರಿಂದ ಭಾರತದಲ್ಲಿ ಚೀನಾಗಿಂತ ಹೆಚ್ಚಿನ ಪ್ರಮಾಣದಲ್ಲಿ ಐಫೋನ್ಗಳು ತಯಾರಾಗಲು ಕಾರಣ ಎಂದು ಗೊತ್ತಾಗುತ್ತದೆ.
ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸುವುದರಿಂದ ಆಗುವ ಅದ್ಬುತ ಲಾಭ