ಕಣ್ಣಿನ ಕೆಳಗಿನ ಚರ್ಮ ಸುಕ್ಕು ಗಟ್ಟುವುದನ್ನು ಹೇಗೆ ಕಡಿಮೆಮಾಡುವುದು ಗೊತ್ತಾ
ವಯಸ್ಸಾದಂತೆ ಚರ್ಮವು ಸುಕ್ಕಾಗುವುದು ಸಹಜ. ಅದರಲ್ಲಿ ಮುಖದ ಚರ್ಮ ಸುಕ್ಕಾದರೆ ಮುಜುಗರ ಆಗುತ್ತದೆ. ಕೆಲವರಿಗೆ ಬಹಳ ಬೇಗ ಅಂದರೆ 50 ವರ್ಷದ ಒಳಗೇ ಕಣ್ಣ ಕೆಳಗಿನ ಚರ್ಮ ಸುಕ್ಕುಗಟ್ಟುತ್ತದೆ. ಇದಕ್ಕೆ ಕಾರಣಗಳು ಅನೇಕ ಇವೆ. ಆದರೇ ಹೀಗಾದಾಗ ಮುಖದ ಸೌಂದರ್ಯ ಹಾಳಾಗುತ್ತದೆ. ವಯಸ್ಸಿಗೂ ಮೊದಲೇ ಕಣ್ಣುಗಳ ಕೆಳಗೆ ಚರ್ಮ ಸುಕ್ಕಾಗಲು ಪ್ರಮುಖವಾಗಿ ಧೂಮಪಾನ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಡ್ರೈ ಸ್ಕಿನ್, ನಿದ್ರಾಹೀನತೆಗಳು ಕಾರಣಗಳಾಗುತ್ತವೆ. ಕಣ್ಣುಗಳ ಕೆಳಗಿನ ಚರ್ಮ ಸುಕ್ಕಾಗಿದ್ದರೆ ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿ.
ಅನಾಸನ್ ಅಥವಾ ಪೈನಾಪಲ್ನಲ್ಲಿರುವ ಬ್ರೋಮೆಲಿನ ಕಿಣ್ವಗಳು ಸುಕ್ಕು ನಿವಾರಣೆ ಮಾಡುವ ಶಕ್ತಿ ಹೊಂದಿವೆ. ಪೈನಾಪಲ್ ರಸವನ್ನು ನೀವು ಕಣ್ಣ ಕೆಳಗಿನ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ, 15 ನಿಮಿಷ ಬಿಟ್ಟು ತೊಳೆಯಿರಿ. ಚರ್ಮ ಟೈಟ್ ಆಗುತ್ತದೆ. ಜೊತೆಗೆ ಹೊಳಪೂ ಬರುತ್ತದೆ. ಆಲಿವ್ ಎಣ್ಣೆಯು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಇದನ್ನು ಕಣ್ಣ ಕೆಳಗಿನ ಭಾಗಕ್ಕೆ ಹಚ್ಚುವುದರಿಂದ ಮಾಯಿಶ್ಚರೈಸ್ ಹಾಗೇ ಲಾಕ್ ಆಗಿ, ಸುಕ್ಕಾಗೋದನ್ನ ತಪ್ಪಿಸುತ್ತದೆ. ಆಲಿವ್ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.
ಹೀಗೆ ಮಾಡುವುದರಿಂದ ಮುಖದ ಚರ್ಮ ಟೈಟ್ ಆಗುತ್ತದೆ. ಎಗ್ವೈಟ್ನಲ್ಲಿ ಚರ್ಮ ಟೈಟ್ ಆಗಿಸುವ ಸಂಕೀರ್ಣಗಳು ಇರುತ್ತವೆ. ಅಕಾಲಿಕವಾಗಿ ಉಂಟಾಗುವ ಸುಕ್ಕನ್ನು ನಿವಾರಿಸಲು ಎಗ್ವೈಟ್ ತುಂಬಾ ಸಹಾಯಕ. ಈ ಎಗ್ವೈಟ್ಅನ್ನು ನಿಮ್ಮ ಕಣ್ಣಿನ ಕೆಳಭಾಗಕ್ಕೆ ಹಚ್ಚಿ, ಅದು ಹಾಗೇ ಒಣಗಲು ಬಿಡಿ, ಬಳಿಕ ತೊಳೆಯಿರಿ. ಜೊತೆಗೆ ಕಣ್ಣಿನ ಕೆಳಗಿನ ಸುಕ್ಕುಗಳಿಗೆ ಚಿಕಿತ್ಸೆ ನೀಡಲು ಅವಕಾಡೊಗಳು ಅತ್ಯುತ್ತಮವಾಗಿವೆ.
ಅವು ಸೂಕ್ಷ್ಮ ಚರ್ಮವನ್ನು ಆಳವಾಗಿ ಪೋಷಿಸುತ್ತವೆ ಮತ್ತು ಸುಕ್ಕುಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಅವಕಾಡೋದ ಪೇಸ್ಟ್ನ್ನು ಕಣ್ಣ ಕಳಗೆ ಹಚ್ಚಿ, ಬಳಿಕ ತೊಳೆಯಿರಿ. ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದ್ದು, ಕಣ್ಣಿನ ಕೆಳಗಿರುವ ಚರ್ಮವನ್ನು ಮೃದುಗೊಳಿಸುತ್ತದೆ. ಆ ಪ್ರದೇಶವನ್ನು ತೇವಾಂಶದಿಂದ ಇಡುವ ಮೂಲಕ, ಸುಕ್ಕು ನಿವಾರಣೆ ಮಾಡುತ್ತದೆ.
READ MORE: ಒಂದು ವೇಳೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಆಗುವ ತೊಂದರೆಗಳು
ಮಹೀಂದ್ರಾ ಥಾರ್ಗೆ ಅದ್ಭುತ ಬೇಡಿಕೆ: ಕಳೆದ ತಿಂಗಳಲ್ಲಿ ಮಾರಾಟವಾದ ಸಂಖ್ಯೆಯು ಎಷ್ಟು ಗೊತ್ತೇ?
ಹೊಟ್ಟೆಯ ಜಂತುಹುಳಗಳನ್ನು ಕೊಲ್ಲುವ ನೈಸರ್ಗಿಕ ಆಹಾರಗಳು
ಟಾಟಾ ಮೋಟಾರ್ಸ್ : 15 ನಿಮಿಷ ಚಾರ್ಜ್ ಮಾಡಿದರೆ 250 ಕಿ.ಮೀ