ಒಂದು ವೇಳೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಆಗುವ ತೊಂದರೆಗಳು

By kavya gk

Published on:

ಯೂರಿಕ್ ಆಸಿಡ್ (Uric acid) ಬಗ್ಗೆ ವೈದ್ಯರ ಅಭಿಪ್ರಾಯ
ಕೈಕಾಲುಗಳ ಗಂಟುಗಳಲ್ಲಿ ನೋವು, ಕಾಲಿನ ಮಂಡಿ ನೋವು ಕಾಣಿಸಿಕೊಳ್ಳುವುದರ ಜೊತೆಗೆ ಗಂಟುಗಳಲ್ಲಿ ಊತ ಮತ್ತು ನಡೆಯಲು ಸಾಧ್ಯವಾಗದಿರುವುದು ಇದೆಲ್ಲಾ ದೇಹದಲ್ಲಿ ಯೂರಿಕ್ ಆಮ್ಲ ಪ್ರಭಾವ ಎಂದು ಹೇಳಬಹುದು. ನಮ್ಮ ದೇಹದ ಮೂತ್ರಪಿಂಡಗಳು ಯೂರಿಕೆ ಆಮ್ಲ ಎನ್ನುವ ವಿಷಕಾರಿ ಅಂಶವನ್ನು ಮೂತ್ರದ ಮೂಲಕ ಹೊರ ಹಾಕದೇ ಇದ್ದಾಗ ದೇಹದಲ್ಲಿಲ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

WhatsApp Group Join Now
Telegram Group Join Now

ಅದರಲ್ಲೂ ಕೆಟ್ಟ ಜೀವನ ಶೈಲಿ ಮತ್ತು ಅನಾರೋಗ್ಯ ಆಹಾರಪದ್ಧತಿಯ ಜೊತೆಗೆ ಮದ್ಯಪಾನ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ನಮ್ಮ ಜನರಿಗೆ ಯೂರಿಕೆ ಆಮ್ಲ ಎಂದರೆ ಏನು? ಇದರ ಸಾಮಾನ್ಯ ಮಟ್ಟ ಎಷ್ಟಿರಬೇಕು? ಮತ್ತು ಅದು ಯಾವಾಗ ಅಪಾಯಕಾರಿ ಎನ್ನುವ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೇ ನಿರ್ಲಕ್ಷ್ಯ ಮಾಡಬಾರದು. ಇದು ಅನಾರೋಗ್ಯದ ಸ್ಥಿತಿ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ನವದೆಹಲಿಯ ಸ್ವಾಮಿ ದಯಾನಂದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಅಜಯ್ ಕುಮಾರ್ ಅವರು ಹೇಳುವ ಪ್ರಕಾರ ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ತ್ಯಾಜ್ಯ ಉತ್ಪನ್ನವಾಗಿದ್ದು, ಇದು ದೇಹದಲ್ಲಿರುವ ಪ್ಯೂರಿನ್ ಎಂಬ ಅಂಶದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಈ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೇಂದರೆ ಮೊದಲಿಗೆ ಫ್ಯೂರಿನ್ ಭರಿತ ಆಹಾರ-ಪದಾರ್ಥಗಳಿಂದ ದೂರವಿರಬೇಕು.

ಅದರಲ್ಲೂ ಪ್ರಮುಖವಾಗಿ ಮೀನು, ಕೆಂಪು ಮಾಂಸ ಕೆಲವೊಂದು ಬೇಳೆಕಾಳುಗಳು, ಮದ್ಯಪಾನ ಸಾಫ್ಟ್ಡ್ರಿಂಕ್ಸ್, ತರಕಾರಿಗಳಾದ ಆಲೂಗಡ್ಡೆ, ಹೂಕೋಸು, ಅಣಬೆಯಂತಹ ಕೆಲವು ಆಹಾರಗಳಿಂದ ದೂರವಿರಬೇಕು. ಯೂರಿಕ್ ಆಮ್ಲವು ಹೆಚ್ಚಿನ ಪ್ರಮಾಣದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿದಾಗ ಮತ್ತು ಮೂತ್ರಪಿಂಡವು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ, ಅದು ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.

ಡಾ. ಅಜಯ್ ಕುಮಾರ್ ರವರ ಪ್ರಕಾರ ದೇಹದಲ್ಲಿ ಯೂರಿಕ್ ಆಮ್ಲದ ಸಾಮಾನ್ಯ ಮಟ್ಟ ಹೀಗಿರಬೇಕು ಪುರುಷರಿಗೆ ಇದು 3.4 ಅಥವಾ 4.5ರಿಂದ 7.0 ಮಿಗ್ರಾಂ/ಡಿಎಲ್ ಆಗಿರಬೇಕು ಹಾಗೂ ಮಹಿಳೆಯರಲ್ಲಿ ಇದು 2.4 ಅಥವಾ 3.5 ರಿಂದ 6.0 ಮಿಗ್ರಾಂ/ಡಿಎಲ್ಗಳಷ್ಟು ಇರಬೇಕು. ಒಂದು ವೇಳೆ ಯೂರಿಕ್ ಆಮ್ಲದ ಮಟ್ಟದಲ್ಲಿ ಅಸಮತೋಲನ ಉಂಟಾದರೇ ಇವು ಹರಳುಗಳ ರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ದೇಹದ ಪ್ರಮುಖ ಅಂಗವಾದ ಕಿಡ್ನಿಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗಿದ್ದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ.

ಈ ಸಂದರ್ಭದಲ್ಲಿ ಸಂಧಿವಾತದ ಲಕ್ಷಣಗಳು, ಮೂತ್ರಪಿಂಡದ ಕಲ್ಲುಗಳು ಮತ್ತು ಕೀಲುಗಳಲ್ಲಿ ಊತದಂತಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಯೂರಿಕ್ ಆಮ್ಲವು ಏಕೆ ಹೆಚ್ಚಾಗುತ್ತದೆಂದರೆ ಅಧಿಕ ಪ್ರೋಟೀನ್ ಭರಿತ ಆಹಾರವನ್ನು ಸೇವನೆ ಮಾಡುವುದು ಅಥವಾ ಕೆಲವೊಂದು ಬಗೆಯ ಆಹಾರ ಸೇವನೆಯ ವಿಚಾರದಲ್ಲಿ ಎಚ್ಚರಿಕೆವಹಿಸದಿರುವುದೇ ಈ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ದೈನಂದಿನ ಆಹಾರಪದ್ಧತಿಯಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು.

ಒಂದು ವೇಳೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಹೆಬ್ಬೆರಳು ಅಥವಾ ಪಾದಗಳ ಕೀಲುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ ಮತ್ತು ಸರಿಯಾಗಿ ನಡೆಯಲು ಆಗುವುದಿಲ್ಲ, ಎದ್ದು ನಿಲ್ಲಲು ಆಗುವುದಿಲ್ಲ, ಮೂತ್ರ ವಿಸರ್ಜಿಸುವಾಗಿ ಉರಿ ಕಾಣಿಸಿಕೊಳ್ಳುವುದು, ಆಯಾಸ-ಸುಸ್ತು ಇವೆಲ್ಲವೂ ಈ ಯೂರಿಕ್ ಆಮ್ಲ ಹೆಚ್ಚಾದರೇ ಉಂಟಾಗುತ್ತದೆ. ಹಾಗಾಗಿ ಮೀನು,

ಅತಿಯಾಗಿ ಕೆಂಪು ಮಾಂಸದ ಸೇವನೆ, ದ್ವಿದಳ ಧಾನ್ಯಗಳು, ಆಲ್ಕೋಹಾಲ್ ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ, ಇದಲ್ಲದೇ ದೈಹಿಕ ಚಟುವಟಿಕೆಗಳ ಕೊರತೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಅನುವಂಶಿಕ ಕಾರಣಗಳು,ಬೊಬ್ಬು, ಔಷಧಿಗಳ ಅಡ್ಡಪರಿಣಾಮಗಳಿಂದ ಯೂರಿಕ್ ಆಮ್ಲವು ದೇಹದಲ್ಲಿ ಹೆಚ್ಚಾಗುತ್ತದೆ.

ದೇಹದಲ್ಲಿನ ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡಲು ಚೆನ್ನಾಗಿ ನೀರು ಕುಡಿಯಿರಿ ಅಂದರೆ 8ರಿಂದ 10 ಗ್ಲಾಸ್ ನೀರು ಕುಡಿಯುವುದರಿಂದ ದೇಹದಿಂದ ಯೂರಿಕ್ ಆಮ್ಲವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಮಸೂರ, ಮೀನು, ಬಿಯರ್ , ಕಿಡ್ನಿಬೀನ್ಸ್, ಕೆಂಪು ಮಾಂಸ, ಅಣಬೆ, ಪಾಲಕ್ ಮುಂತಾದ ಪ್ಯೂರಿನ್ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದರಿಂದ ದೂರವಿರಿ.

ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ವ್ಯಾಯಾಮ ಮಾಡಿ, ಯೋಗ ಅಥವಾ ವಾಕಿಂಗ್ ಮಾಡಿ. ಸೌತೆಕಾಯಿ, ಟೊಮೊಟೋ, ಚೆರ್ರಿ, ಸೇಬು, ಸೋರೆಕಾಯಿಗಳಂತಹ ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಮಾಡಿರಿ. ನಿಮ್ಮ ಕೀಲುಗಳಲ್ಲಿ ಯಾವಾಗಲೂ ನೋವು ಇದ್ದರೆ, ಊತ ಕಡಿಮೆಯಾಗದಿದ್ದರೆ, ಮತ್ತು ಯೂರಿಕ್ ಆಮ್ಲದ ಮಟ್ಟವು 8.0mg/dl ಗಿಂತ ಹೆಚ್ಚಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿರಿ ಇಲ್ಲದಿದ್ದರೇ ಸಂಧಿವಾತ ಅಥವಾ ಮೂತ್ರಪಿಂಡದ ಸಮಸ್ಯೆಗೆ ಒಳಗಾಗಬಹುದು.

kavya gk

Leave a Comment