BPL card:ನಮ್ಮ ಸರ್ಕಾರವು ದೇಶದಲ್ಲಿ ಬಡತನ ಇರುವವರಿಗೆ ರೇಶನ್ ಕಾರ್ಡ್ ಗಳ ವಿತರಣೆ ಮಾಡುತ್ತಿದೆ. ಬಿಪಿಎಲ್ ರೇಷನ್ ಕಾರ್ಡ್ ಹಾಗು ಅಂತ್ಯೋದಯ ಕಾರ್ಡ್ ಅನ್ನು ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ ಕೊಡಲಾಗುತ್ತದೆ. ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದೀಗ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ಸುದ್ದಿ ಕಾದಿದೆ..
BPL card
ಬಿಪಿಎಲ್ ಹಾಗೂ ಅಂತ್ಯೋದಯ ಈ ಎರಡು ರೇಶನ್ ಕಾರ್ಡ್ ಗಳನ್ನು ಕೊಡುವುದು ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಲಿ ಎಂದು. ಬಿಪಿಎಲ್ ಕಾರ್ಡ್ ಇಲ್ಲದೇ ಹೋದರೆ ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆದುಕೊಳ್ಳಲು ಕೂಡ ಸಾಧ್ಯ ಆಗುವುದಿಲ್ಲ. ಹಾಗಾಗಿ ಜನರಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಬಹಳ ಮುಖ್ಯ. ಈ ಕಾರ್ಡ್ ಗಳನ್ನು ಹೊಂದಿರುವವರಿಗೆ ಸರ್ಕಾರದಿಂದ ಉಚಿತ ರೇಷನ್ ಕೂಡ ಸಿಗುತ್ತಿದೆ.
ಜನರ ಮೇಲಿನ ಹಿತ ದೃಷ್ಟಿಯಿಂದ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ ವಿತರಣೆ ಮಾಡುತ್ತಿದೆ, ಆದರೆ ಕೆಲವು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಸೌಕರ್ಯಗಳಿದ್ದರು ಸಹ, ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಪಡೆದಿದ್ದಾರೆ. ಇವುಗಳನ್ನು ಬಳಸುತ್ತಿರುವುದು ಗುರುತಿನ ಚೀಟಿಯಾಗಿ ಆಗಿದ್ದು, ಯಾವುದೇ ಬೇರೆ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ.
ಅಂಥವರ ಬಗ್ಗೆ ಸರ್ಕಾರಕ್ಕೆ ತಿಳಿದುಬಂದಿದ್ದು, ಇಂಥ ಕೆಲಸಗಳನ್ನು ನಿಲ್ಲಿಸಿ, ರೇಷನ್ ಕಾರ್ಡ್ ಗಳನ್ನು ಹಿಂದಿರುಗಿಸಬೇಕು ಎಂದು ಆದೇಶ ನೀಡಿದೆ. ಒಂದು ವೇಳೆ ರಿಟರ್ನ್ ಮಾಡದೇ ಇರುವವರಿಗೆ ಸರ್ಕಾರವೇ ಕ್ರಮ ತೆಗೆದುಕೊಳ್ಳುತ್ತದೆ. ಅಂಥ ಜನರ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಿ, ಅವರ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರದಿಂದಲೇ ಮಾಹಿತಿ ಸಿಕ್ಕಿದೆ. ಹೌದು, ಈ ಕಾರಣಕ್ಕೆ ಜನರು ಹುಷಾರಾಗಿರಬೇಕು.
ರೇಷನ್ ಕಾರ್ಡ್ ಗಳನ್ನು ರದ್ದು ಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರವು ಬಹಳ ವೇಗವಾಗಿ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾಗಾಗಿ ಸರ್ಕಾರವೇ ನಿಮ್ಮ ರೇಷನ್ ಕಾರ್ಡ್ ರದ್ದುಗೊಳಿಸುವುದು ಬೇಡ ಎಂದು ಅನ್ನಿಸಿದರೆ, ನೀವೇ ನಿಮ್ಮ ಹತ್ತಿರದ ತಾಲ್ಲೂಕ್ ಆಫೀಸಿಗೆ ಹೋಗಿ, ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಹಿಂದಿರುಗಿಸಿ.
Read More
Bank FD :ಬ್ಯಾಂಕ್ ಎಫ್ಡಿ ಯಲ್ಲಿ ಹೂಡಿಕೆ ಮಾಡಿದ್ದರೆ ನಿಮಗಿದೆ ಒಳ್ಳೆಯ ಸುದ್ದಿ!
Indian Army Recruitment 2024:ಇಂಡಿಯನ್ ಆರ್ಮಿಯಲ್ಲಿ ಇವೆ ಕ್ರೀಡಾಪಟುಗಳಿಗೆ ಹುದ್ದೆಗಳು!