Bank Sakhi Yojane:ಗ್ರಾಮೀಣ ಮಹಿಳೆಯರು ತಿಂಗಳಿಗೆ ಗಳಿಸಿ ₹40,000 ಹಣ ,ಸರ್ಕಾರದಿಂದ ಬಿಗ್ ನ್ಯೂಸ್

By kannadadailyupdate

Published on:

ಬ್ಯಾಂಕ್ ಸಖಿ ಯೋಜನೆ

Bank Sakhi Yojane:ಸರ್ಕಾರವು ನಮ್ಮ ದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಇರಬೇಕು ಎಂದು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಹಿಳೆಯರ ಸದೃಢತೆ ಇಲ್ಲಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಎಲ್ಲಾ ಮಹಿಳೆಯರಿಗೆ ಇದೀಗ ಸರ್ಕಾರವು ಹೊಸದಾಗಿ ಬ್ಯಾಂಕ್ ಸಖಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು ತಿಂಗಳಿಗೆ ಬರೋಬ್ಬರಿ 40 ಸಾವಿರ ಗಳಿಸಬಹುದು. ಇದು ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ.

WhatsApp Group Join Now
Telegram Group Join Now

Bank Sakhi Yojane

ಈ ಯೋಜನೆಯಲ್ಲಿ ಮಹಿಳೆಯರನ್ನು ಬ್ಯಾಂಕ್ ಸಖಿಯನ್ನಾಗಿ ಮಾಡಲಾಗುತ್ತದೆ, ಬ್ಯಾಂಕ್ ಗ್ರಾಹಕರ ಅಗತ್ಯತೆಗಳನ್ನು ಅವರು ಪೂರೈಸಬೇಕು. ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂದರೆ, ಬಹಳಷ್ಟು ಜನರು ತಮ್ಮ ಮನೆಯಿಂದ ಬ್ಯಾಂಕ್ ದೂರದಲ್ಲಿದೆ ಎನ್ನುವ ಕಾರಣಕ್ಕೆ ಬ್ಯಾಂಕ್ ಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯ ಆಗುವುದಿಲ್ಲ. ಅಂಥವರಿಗಾಗಿ ಸರ್ಕಾರವು ಈಗ ಬ್ಯಾಂಕ್ ಸಖಿಯರನ್ನು ಅವರ ಮನೆಗಳಿಗೆ ಕಳಿಸುತ್ತದೆ. ಬ್ಯಾಂಕ್ ಸಖಿಯಾಗಿ ಕೆಲಸಕ್ಕೆ ಸೇರುವವರು..

ಬ್ಯಾಂಕ್ ಸಖಿ ಯೋಜನೆ ಯಾರಿಗೆ ಅನುಕೂಲ

ಅಂಥ ಜನರ ಮನೆಗೆ ಹೋಗಿ ಅವರಿಗೆ ಬ್ಯಾಂಕ್ ಸೇವೆಗಳನ್ನು ಒದಗಿಸಿಕೊಡಬೇಕು. ಈ ಯೋಜನೆ ಈಗ ಉತ್ತರ ಪ್ರದೇಶದಲ್ಲಿ ಶುರುವಾಗಿದ್ದು, ಶೀಘ್ರದಲ್ಲೇ ದೇಶದ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ಸಖಿ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದೆ. 2023ರಲ್ಲಿ ಈ ಯೋಜನೆ ಶುರುವಾಗಿದ್ದು, ಬ್ಯಾಂಕ್ ಸಖಿಯಾಗಿ ಇರುವವರಿಗೆ ಗೌರವಧನ ಹಾಗೂ ಲ್ಯಾಪ್ ಟಾಪ್ ಖರೀದಿ ಮಾಡಲು 50 ಸಾವಿರ ವರೇಜಿ ಹಣ ನೀಡಲಾಗುತ್ತದೆ. ಹಳ್ಳಿಯ ಜನರಿಗೆ ಬ್ಯಾಂಕ್ ಸೇವೆಗಳನ್ನು ನೀಡಬೇಕು..

ಬ್ಯಾಂಕ್ ಸಖಿ ಯೋಜನೆ

ಹಾಗಾಗಿ ಲ್ಯಾಪ್ ಟಾಪ್ ಅವಶ್ಯಕತೆ ಇರುತ್ತದೆ. ಲ್ಯಾಪ್ ಟಾಪ್ ಇದ್ದರೆ ಮನೆಯಿಂದಲೇ ಕೆಲಸ ಮಾಡಬಹುದು. ಈ ಕೆಲಸಕ್ಕೆ ಟ್ರೇನಿಂಗ್ ಪಡೆದು, ಹಳ್ಳಿಗಳಲ್ಲಿ ಕೆಲಸ ಮಾಡಬಹುದು. ಈ ಕೆಲಸಕ್ಕೆ ಇಂತಿಷ್ಟು ಎಂದು ಸಂಬಳ ನಿಗದಿ ಆಗಿಲ್ಲ. ಒಂದೊಂದು ವಹಿವಾಟಿಗೆ ಇಷ್ಟು ಎಂದು ಕಮಿಷನ್ ಸಿಗುತ್ತದೆ. ಕಮಿಷನ್ ಹಣದಲ್ಲೇ ತಿಂಗಳಿಗೆ ₹40,000 ವರೆಗು ಸಂಪಾದನೆ ಮಾಡಬಹುದು. ಮಹಿಳೆಯರು ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು, ಸ್ವಉದ್ಯೋಗ ಶುರು ಮಾಡಬೇಕು ಎನ್ನುವುದು ಈ ಯೋಜನೆಯ ಉದ್ದೇಶ ಆಗಿರುತ್ತದೆ.

Read More

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸಿಗೋ ಪಾಲು ಎಷ್ಟು? ಕಾನೂನು ಏನು ಹೇಳುತ್ತೆ ಗೊತ್ತಾ?

Aadhar Mobile Number Link:ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

Post Office FD :ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಅತಿ ಹೆಚ್ಚು ಬಡ್ಡಿ !

kannadadailyupdate

Leave a Comment