ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸಿಗೋ ಪಾಲು ಎಷ್ಟು? ಕಾನೂನು ಏನು ಹೇಳುತ್ತೆ ಗೊತ್ತಾ?

By kannadadailyupdate

Published on:

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸಿಗೋ ಪಾಲು

Grandchildren Inheritance :ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ವಿವಾದಗಳು, ಕೇಸ್ ಗಳು ನಡೆಯುತ್ತದೆ. ಆಸ್ತಿ ವಿಚಾರಕ್ಕೆ ಕುಟುಂಬದ ಸದಸ್ಯರ ನಡುವೆಯೇ ಜಗಳ ವೈಮನಸ್ಸು ಶುರುವಾಗುತ್ತದೆ. ಈ ರೀತಿ ಆಗಬಾರದು ಎಂದರೆ ಸರಿಯಾದ ಸಮಯದಲ್ಲಿ ಆಸ್ತಿಯನ್ನು ವಿಭಜನೆ ಮಾಡಿಬಿಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ನಮ್ಮ ದೇಶದ ಕಾನೂನಿನಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅನೇಕ ಕಾನೂನುಗಳಿವೆ, ಅವುಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ಹಾಗೆ, ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಹಕ್ಕಿದೆ ಗೊತ್ತಾ?

WhatsApp Group Join Now
Telegram Group Join Now

Grandchildren Inheritance

ತಾತನ ಆಸ್ತಿಯಲ್ಲಿ ಮೊಮ್ಮಗನ ಹಕ್ಕು ಇದೆಯಾ ಎಂದು ನೋಡುವುದಾದರೆ ಹಕ್ಕು ಇರುತ್ತದೆ. ಮೊಮ್ಮಗನಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ಆದರೆ ಅದು ತಾತ ಸಂಪಾದನೆ ಮಾಡಿರುವ ಆಸ್ತಿ ಆಗಿದ್ದು, ಅದನ್ನು ಬೇರೆಯವರ ಹೆಸರಿಗೆ ಬರೆದಿದ್ದರೆ, ಅದನ್ನು ಮೊಮ್ಮಕ್ಕಳು ಪ್ರಶ್ನಿಸುವ ಹಾಗಿಲ್ಲ. ಇದು ಕಾನೂನಿನ ನಿಯಮ. ಒಂದು ವೇಳೆ ಆ ತಾತ ವಿಲ್ ಮಾಡದೆ ವಿಧಿವಶರಾದರೆ ಉತ್ತರಾಧಿಕಾರಿಗಳಿಗೆ ಮೊದಲ ಅಧಿಕಾರ ಇರುತ್ತದೆ. ಆದರೆ ಅದು ಮೊಮ್ಮಗ ಆಗಿರುವುದಿಲ್ಲ.

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸಿಗೋ ಪಾಲು ಎಷ್ಟು?

ತಾತ ವಿಧಿವಶರಾದರೆ ಅವರ ಪತ್ನಿ, ಮಕ್ಕಳು ಉತ್ತರಾಧಿಕಾರಿ ಸ್ಥಾನಕ್ಕೆ ಬರುತ್ತಾರೆ. ತಾತನ ಪತ್ನಿ ಅಥವಾ ಮಕ್ಕಳು ಉತ್ತರಾಧಿಕಾರಿಯಾಗಿ ಆ ಆಸ್ತಿಯನ್ನು ಅವರ ವೈಯಕ್ತಿಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆ ಆಸ್ತಿಯ ಮೇಲೆ ಇನ್ಯಾರಿಗು ಹಕ್ಕು ಇರುವುದಿಲ್ಲ. ಹಾಗೆಯೇ ಮೊಮ್ಮಗನಿಗೆ ಇಲ್ಲಿ ಹಕ್ಕು ಬರುವುದಿಲ್ಲ. ಒಂದು ವೇಳೆ ತಾತನ ಮಗ ಅಥವಾ ಮಗಳು ಮರಣ ಹೊಂದಿದ್ದರೆ, ಆ ಅಸ್ತಿಗೆ ಉತ್ತರಾಧಿಕಾರಿ ಅವರ ಮಕ್ಕಳಾಗುತ್ತಾರೆ.

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸಿಗೋ ಪಾಲು

ಒಬ್ಬ ವ್ಯಕ್ತಿಯ ತಾತ ಮೃತರಾದರೆ, ತಾತನ ಆಸ್ತಿ ಆತನ ತಂದೆಗೆ ಹೋಗುತ್ತದೆ. ನಂತರದ ದಿನಗಳಲ್ಲಿ ತಂದೆ ಆ ಆಸ್ತಿಯನ್ನು ಮಗನಿಗೆ ಕೊಡಬಹುದು. ಅಕಸ್ಮಾತ್ ಅಜ್ಜ ಮೃತವಾಗುವ ವೇಳೆಗಾಗಲೇ ಮೊಮ್ಮಗನ ತಂದೆ ಮೃತರಾಗಿದ್ದರೆ, ಆಗ ಮಾತ್ರ ಮೊಮ್ಮಗನಿಗೆ ತಾತನ ಆಸ್ತಿ ನೇರವಾಗಿ ಸಿಗುತ್ತದೆ. ಮೊಮ್ಮಕ್ಕಳಿಗೆ ಪೂರ್ವಿಕರ ಆಸ್ತಿ ಮೇಲೆ ಜನ್ಮಸಿದ್ಧ ಹಕ್ಕು ಇರುತ್ತದೆ. ಈ ಬಗ್ಗೆ ತೊಂದರೆಯಾದರೆ ಸಿವಿಲ್ ಕೋರ್ಟ್ ಗೆ ಹೋಗಬಹುದು.

Read More

Ayushman Bharat Card ಪಡೆಯುವುದು ಹೇಗೆ ?ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ

Gruha lakshmi Scheme :ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ತಪ್ಪದೇ ಈ ದಾಖಲೆಗಳನ್ನ ಸಲ್ಲಿಸಿ ಹಣ ಪಡೆಯಿರಿ !

Free Bike :ವಿಕಲಚೇತನರಿಗೆ ಉಚಿತ ಬೈಕ್ ಜೊತೆಗೆ ಸಿಗಲಿದೆ 1 ಲಕ್ಷ! ಸರ್ಕಾರದ ಈ ಯೋಜನೆಗೆ ಇಂದೇ ಅಪ್ಲೈ ಮಾಡಿ

kannadadailyupdate

Leave a Comment