Khata Transfer:ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಈಗ 7 ದಿನ ಸಾಕು! ಸರ್ಕಾರದಿಂದ ಹೊಸ ರೂಲ್ಸ್!

By kannadadailyupdate

Published on:

Khata Transfer

Khata transfer :ಒಂದು ಜಮೀನನ್ನು ನಿಮ್ಮ ಹೆಸರಿಗೆ ಟ್ರಾನ್ಸ್ಫರ್ ಮಾಡಿಕೊಳ್ಳಬೇಕು ಎಂದರೆ, ಮೊದಲೆಲ್ಲಾ 30 ರಿಂದ 35 ದಿನಗಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ತಕರಾರು ಅರ್ಜಿ ಸಲ್ಲಿಸಲು ಇಷ್ಟು ದಿವಸಗಳ ಸಮಯ ನೀಡಲಾಗುತ್ತಿತ್ತು, ಅದರಿಂದ ಕೆಲವು ಜನರಿಗೆ ಒಳ್ಳೆಯದೇ ಅನ್ನಿಸಿದರೂ ಸಹ, ಇನ್ನು ಕೆಲವರು ದುರುಪಯೋಗ ಪಡಿಸಿಕೊಂಡಿದ್ದು ಉಂಟು. ಆದರೆ ಈಗ ಇದಕ್ಕಾಗಿ ನೀಡುವ ಸಮಯವನ್ನು ಕಡಿಮೆ ಮಾಡಲಾಗಿದೆ.

WhatsApp Group Join Now
Telegram Group Join Now

Khata transfer

Khata Transfer
Khata Transfer

ಒಂದು ರೀತಿಯಲ್ಲಿ ಇದು ಜಮೀನು ರಿಜಿಸ್ಟರ್ ಮಾಡಿಸಿಕೊಳ್ಳುವವರಿಗೆ ಸರಿಯಾದ ನಿಯಮ ಎಂದು ಹೇಳಬಹುದು. ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಮ್ಯುಟೇಶನ್ ಬಹಳ ಮುಖ್ಯವಾದ ಪ್ರಕ್ರಿಯೆಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಲ್ಲ. ಮ್ಯುಟೇಶನ್ ಪ್ರಕ್ರಿಯೆ ಎಂದರೆ ಒಂದು ಜಮೀನು ನೋಂದಣಿಯಾದ ನಂತರ ಭೂಮಿ ಕೇಂದ್ರದ ಮೂಲಕ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದು. ಇದಕ್ಕೆ ತೆಗೆದುಕೊಳ್ಳುವ ಸಮಯವನ್ನು ಈಗ ಕಡಿಮೆ ಮಾಡಲಾಗಿದೆ.

ಒಬ್ಬ ವ್ಯಕ್ತಿಯ ಹೆಸರಿನಿಂದ ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ಒಂದು ಆಸ್ತಿಯನ್ನ ವರ್ಗಾವಣೆ ಮಾಡಲು 4 ವಿಧಾನವಿದೆ. ಕ್ರಯಪತ್ರ, ದಾನ ಪತ್ರ, ವಿಭಾಗ ಹಾಗೂ ಪೌತಿ ಪತ್ರ. ಮೊದಲನೆಯದಾಗಿ ಕ್ರಯ ಪತ್ರದ ಮೂಲಕ ಆಸ್ತಿ ವರ್ಗಾವಣೆ ಮಾಡಬೇಕಾಗಿ ಬಂದರೆ, ಮೊದಲೆಲ್ಲಾ 30 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ 7 ದಿನಗಳ ಸಮಯ ತೆಗೆದುಕೊಳ್ಳುತ್ತದೆ.

ಎರಡನೆಯದು ದಾನ ಹಾಗೂ ವಿಭಾಗ ಪತ್ರದ ಮೂಲಕ ಆಸ್ತಿ ಹಂಚಿಕೆ ನಡೆದರು ಕೂಡ, ಮೊದಲೆಲ್ಲಾ 30 ರಿಂದ 35 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ 7 ದಿನಗಳ ಒಳಗೆ ಇದೆಲ್ಲವೂ ಮುಗಿದು ಹೋಗುತ್ತದೆ. ಮೂರನೆಯದು ಪೌತಿ ಖಾತೆ, ಇದು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಆಸ್ತಿ ಇದ್ದು, ಆ ವ್ಯಕ್ತಿ ಮರಣ ಹೊಂದಿದರೆ, ಆತನ ಆಸ್ತಿಯನ್ನು ಮನೆಯವರ ಹೆಸರಿಗೆ ಮಾಡಲು ಪೌತಿ ಖಾತೆಯ ಮೂಲಕ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ 30 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ 15 ದಿನಗಳಲ್ಲಿ ಈ ಪ್ರಕ್ರಿಯೆ ಮುಗಿದು ಹೋಗುತ್ತದೆ.

Read More

kannadadailyupdate

Leave a Comment